ಹಾಸ್ಯದ ಜೊತೆ ಮನರಂಜನೆ ಮನೋವಿಕಾಸ ಸಹ ಸೇರಿಕೊಂಡಿರುವ ಚಿತ್ರ ಬಿಲ್ ಗೇಟ್ಸ್ ಕನ್ನಡ ಸಿನಿಮಾ 12 ದಿವಸಗಳ ಚಿತ್ರೀಕರಣದಲ್ಲಿ ಶೇಖಡ 40 ರಷ್ಟು ಕ್ಯಾಮರದಲ್ಲಿ ತುಂಬಿಕೊಂಡು ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ ಸುತ್ತ ಚಿತ್ರೀಕರಣಕ್ಕೆ ಹೊರಟು ನಿಂತಿದೆ. ಮೈಸೂರಿನ ಜಲದರ್ಶಿನಿ ಸುತ್ತ ಮುತ್ತ ಚಿತ್ರೀಕರಣದಲ್ಲಿ ಅನೇಕ ದೃಶ್ಯಗಳನ್ನು ಸೆರೆ ಹಿಡಿದುಕೊಂಡರು ಛಾಯಾಗ್ರಾಹಕ ರಾಜೇಶ್ ಸಿ ತಿಲಕ್.
ಈ ತಿಂಗಳ 14 ರಿಂದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಿ, ಮತ್ತೆ 25 ರಿಂದ ಮೈಸೂರಿಗೆ ಬಂದು ಚಿತ್ರೀಕರಣ ನಡೆಸಲಿದೆ ಚಿತ್ರ ತಂಡ. ಸಂಕಲನಕಾರ ಆಗಿದ್ದು ಕೊಂಡು ಸಹಾಯಕ ನಿರ್ದೇಶಕ ಆಗಿ ಹಲವಾರು ವರ್ಷಗಳ ಅನುಭವ ಹೊಂದಿರುವ ಶ್ರೀನಿವಾಸ್ ಅವರ ಪ್ರಥಮ ಪ್ರಯತ್ನ ಈ ಬಿಲ್ ಗೇಟ್ಸ್. ಜೆ ಮಲ್ಲಿಕಾರ್ಜುನ್ ಅವರ ಸಂಭಾಷಣೆ ಈ ಚಿತ್ರಕ್ಕೆ ಇದೆ.
ನೋಬಿನ್ ಪಾಲ್ ಅವರ ಸಂಗೀತ, ಮರಿಸ್ವಾಮಿ ಅವರ ಸಂಕಲನ, ಕಲೈ ಅವರ ನೃತ್ಯ ನಿರ್ದೇಶನ ಇರುವ ಈ ಚಿತ್ರದಲ್ಲಿ ಶಿಶಿರ್ ಶಾಸ್ತ್ರೀ, ರೋಜಾ, ಮೇಘನ ಅಪ್ಪಯ್ಯ, ಚಿಕ್ಕಣ್ಣ, ಕುರಿ ಪ್ರತಾಪ್, ಯೆತಿರಾಜ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಶ್ರೀ ಪಾಂಚಜನ್ಯ ಕ್ರಿಯೇಷನ್ ಅಡಿಯಲ್ಲಿ ಎಂಟು ಸ್ನೇಹಿತರು ಸೇರಿಕೊಂಡು ಈ ಸಿನಿಮಾಕ್ಕೆ ಹಣ ಒದಗಿಸುತ್ತಾ ಇದ್ದಾರೆ.